ನಿನಗೇನೋ ಹೇಳಬೇಕು ಕೇಳು
ನಿನಗೇನೋ ಹೇಳಬೇಕು ಕೇಳು
ನಿನ್ನೊಲುಮೆಯ ಮೊಗ್ಗೊಂದು ಚಿಗುರಿತಿಹುದು
ಈ ನೂತನ ತಾಯ ಬಸಿರಿನಲಿ,
ನಿನದಿಷ್ಟು , ನನದಿಷ್ಟು ಉಸಿರ ಸೇರಿ.
ಅರಳುತಿಹುದು ಖುಷಿಯ ಪಸರಿಸಿ
ನಮ್ಮೀ ಪ್ರೀತಿಯ ಪಯಣಕ್ಕೆ
ಕಾತುರ ತಾಳದೆ ಉಸುರುತಿರುವೆನು,
ಬರುತಿಹುದು ಪುಟ್ಟ ಚೆಲುವು.
ಮೊಗ್ಗಾಗಿ ಹೂವಾಗಿ ಮಗುವಾಗಿ,
ನನ್ನೊಡಲಿನಿಂದ ನಿನ್ನ ಮಡಿಲಿಗೆ.
ತನ್ನೀ ಹಾಲ್ದುಟಿಯಿಂದ ನಿನ್ನ,
ಅಪ್ಪ ಎಂದು ತೊದಲ್ನುಡಿಯಲು.
ನಿನಗೇನೋ ಹೇಳಬೇಕು ಕೇಳು
ನಿನಗೇನೋ ಹೇಳಬೇಕು ಕೇಳು