Narasimharaju: The Icon of Kannada Comedy

FACTS OF NARSIMHARAJU

Sripada studios remember the prominent Kannada film actor, the greatest comedian with a detailed blog on him.

ಕನ್ನಡ ಲೋಕದ ಹಾಸ್ಯ ಚಕ್ರವರ್ತಿ 

ಇಂದು 97 ವರ್ಷಗಳ ಹಿಂದೆ ತುಮಕೂರಿನಲ್ಲಿ ಜನಿಸಿದ ಮಗು ತಿಪಟೂರು ರಾಮರಾಜು ಅಂದೇ ತಾನು ಕಲಾವಿದ ಎಂದು ನಿರ್ಧರಿಸಿದಂತೆ ನಾಲ್ಕನೇ ವಯಸ್ಸಿಗೆ ತನ್ನ ಎಳೇ ಪಾದಗಳು ಅವರನ್ನು ರಂಗಭೂಮಿಗೆ ಸೆಳೆದವು. ಪ್ರಹಲ್ಲಾದ ,ಲೋಹಿತಾಶ್ವ ,ಕೃಷ್ಣ , ಮಕರಂದ ರಂತ ದೊಡ್ಡ ಪಾತ್ರಗಳು ಇವರಿಗೆ ಒಲಿದುಬಂತು. ಅಲ್ಲಿಂದ ಅವರ ಹೆಜ್ಜೆಗಳು ಹಿಂದೆ ನೋಡಲೇ ಇಲ್ಲ ,ಮಿಕ್ಕೆಲ್ಲವೂ ಇತಿಹಾಸ.

ರಂಗಭೂಮಿಯಿಂದ ಚಿತ್ರರಂಗಕ್ಕೆ ಕಪ್ಪು ಬಿಳುಪಿನಿಂದ ಬಣ್ಣದವರೆಗೆ ಬಾಲನಟ ನಿಂದ ಹಾಸ್ಯಚಕ್ರವರ್ತಿ ಯವರೆಗೂ ಇವರ ಪಯಣ ಬೆಳೆಯಿತು.

Narasimharaju_Sripada Studios

ಗಿಡ್ಡ ಆಕೃತಿ , ಸಣಕಲು ದೇಹ , ಉಬ್ಬುಹಲ್ಲು , ಸನ್ನಿವೇಶಕ್ಕೆ ತಕ್ಕಂತೆ ಮುಖಭಾವ ಹಾವಭಾವ ತಿಳಿಹಾಸ್ಯ ಜೊತೆಯಲ್ಲಿ ಹಿಮ್ಮೇಳ (Background music) ವೀಕ್ಷಕರನ್ನು ನಗೆಯ ಕಡಲಲ್ಲಿ ಮುಳುಗಿಸುತ್ತಿತ್ತು. ಪ್ರಾರಂಭದಲ್ಲಿ ತಮ್ಮ ದೇಹ ಆಕಾರಕಷ್ಟೆ ಪ್ರಸಿದ್ಧರಾದರು ನಂತರ ತಮ್ಮ ನಟನೆಯ ಚಾಕಚಕ್ಯತೆಯಿಂದ ಎಲ್ಲರ ಮನಸೆಳೆದರು. ಸುಂದರರಲ್ಲಿ ಅತಿಸುಂದರರ ತ್ರಿವಳಿ ‘ಕುಮಾರ್’ ನಾಯಕರ ಅಬ್ಬರದ ನಡುವೆಯೂ ಇವರ ಪ್ರಸಿದ್ಧಿ ಕಡಿಮೆಯಾಗಲಿಲ್ಲ. ಬೇಡರ ಕಣ್ಣಪ್ಪನ ಕಾಶಿ ಹಾಗೂ ಕೃಷ್ಣದೇವರಾಯನ ತೆನಾಲಿ ರಾಮಕೃಷ್ಣನ ಪಾತ್ರಗಳು ಈಗಲೂ ಕಣ್ಣಿಗೆ ಕಟ್ಟಿದ ಹಾಗಿದೆ.

ಅಶ್ಲೀಲ ಸಂಭಾಷಣೆ ಮತ್ತು ಅನಾರೋಗ್ಯಕರ ಸನ್ನಿವೇಶ ಸೃಷ್ಟಿಸಿ ಪ್ರೇಕ್ಷಕರನ್ನು ರಂಜಿಸಲು ಬಯಸುವ ಈ ಯುಗದಲ್ಲಿ , ಸಭ್ಯ ತಿಳಿಯಾದ ಆರೋಗ್ಯಕರ ಹಾಸ್ಯ ಸೃಷ್ಟಿಸಿ ಮತ್ತು ಹಾಸ್ಯದ ಜೊತೆಗೆ ಜೀವನಕ್ಕೆ ಒಂದು ಒಳ್ಳೆ ಸಂದೇಶ ಕೊಡುತ್ತಿದ ಇಂಥ ನಟರು ಯಾವತ್ತೂ ಅಜಾರಮರ.  ಜುಲೈ ೧೯೭೯ ರಲ್ಲಿ ಇಹಲೋಕ ತ್ಯಜಿಸಿದ ಇವರು ‘ಕನ್ನಡದ ಚಾರ್ಲಿಚಾಪ್ಲಿನ್’ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಇವರ ನಟನೆ , ಕಲಾ ಪಯಣ ಇಂದಿನ ಯುವಹಾಸ್ಯ  ನಟರಿಗೆ ದಾರಿದೀಪ ಎಂದು ಹೇಳಿದರೆ ಸುಳ್ಳಾಗದು.ಮನೊರಂಜನೆಗೆ ಇತರೆ ಭಾಷೆಗಳ ಅನುವಾದಿತ ಸಿನಿಮಾಗಳ ಮೊರೆಹೋಗುವ ಬದಲು 

ಇಂಥ ನಟರು ನಟಿಸಿರುವ ಹಳೆಯ ಕಪ್ಪುಬಿಳುಪು ಸಿನಿಮಾಗಳನ್ನ ಮತ್ತೆ ಬಣ್ಣೀಕರಿಸಿ ಬಿಡುಗಡೆ ಮಾಡಿದರೆ  ಯುವಜನಾಂಗಕ್ಕೆ ಹಳೆಯ ತಲೆಮಾರಿನ ಸಿನಿಮಾಗಳನ್ನು ಪರಿಚಯಿಸುವ ದಾರಿಯಾಗುತ್ತದೆ. ಹೀಗೆ ಹಿರಿಯ ಕಲಾವಿದರನ್ನು ಚಿತ್ರರಂಗದ ದಿಗ್ಗಜರನ್ನು ಸ್ಮರಿಸುವ ಒಂದು ಚಿಕ್ಕ ಪ್ರಯತ್ನ ವಾಗುವುದು.ಅವರ ಜಯಂತಿಯ ಅಂಗವಾಗಿ ನಮ್ಮ ಸಂಸ್ಥೆ ಇಂದ ಒಂದು ಸಣ್ಣ ಜ್ಞಾಪಕ ಪ್ರಯತ್ನ.

an observation by RAJ ARADHYA and
SRIPADA STUDIOS

Leave a Reply

Your email address will not be published. Required fields are marked *